RSS ANAUPACHARIKA NIVASI VARGA 🤔😀

  

thoughts

ಆರ್‌ಎಸ್‌ಎಸ್‌ನ ಅನೌಪಚಾರಿಕ್ ನಿವಾಸಿ ವರ್ಗದಲ್ಲಿ ಭಾಗವಹಿಸಿದ ಎಲ್ಲಾ ೧೨ ಮಂದಿ ಸ್ಪರ್ಧಿಗಳಿಗೆ ಒಂದು ಅಚ್ಚರಿ ಕಾಯುತ್ತಿತ್ತು. ಈ ಕಾರ್ಯಕ್ರಮವು ಬುಧವಾರ, ಏಪ್ರಿಲ್ ೧೬, ೨೦೨೫ ರಂದು ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ನಡೆಯಿತು. ನಮ್ಮೆಲ್ಲರಿಗೂ ರಾತ್ರಿ ೮ ಗಂಟೆಗೆ ತಲುಪಲು ಸೂಚಿಸಲಾಗಿತ್ತು ಮತ್ತು ಗುಂಪಿನೊಂದಿಗೆ ಹಂಚಿಕೊಳ್ಳಲು ನಮ್ಮ ನಮ್ಮ ಊಟದ ಡಬ್ಬಿಗಳನ್ನು (food boxes) ತರಲು ತಿಳಿಸಲಾಗಿತ್ತು. ಒಂದು ಅನಿರೀಕ್ಷಿತ ಸ್ಪರ್ಧೆಯೊಂದಿಗೆ ಸಂಜೆಯು ರೋಮಾಂಚಕ ತಿರುವು ಪಡೆದುಕೊಂಡಿತು, ಅದರ ವಿವರಗಳು ಕೆಳಕಂಡಂತಿವೆ:

ಸ್ಪರ್ಧೆ

ಈ ಕೆಳಗಿನ 15 ಪದಗಳನ್ನು ಉಪಯೋಗಿಸಿ ಒಂದು ಕಥೆ ಬರೆಯಿರಿ. ಕಾಲಾವಕಾಶ  20 ನಿಮಿಷಗಳು.

  1. ಕಾಡು
  2. ನಾಯಿ
  3. ಮನೆ
  4. ಮಳೆ 
  5. ಈಜುಕೊಳ
  6. ಸುರಂಗ
  7. ಹವಾನಿಯಂತ್ರಿತ 
  8. ರೈಲು
  9. ಆಸ್ಪತ್ರೆ
  10. ಅಧ್ಯಾಪಕಿ
  11. ಕಳ್ಳ
  12. ವೈದ್ಯ
  13. ಮುದುಕಿ
  14. ರಾಜ 
  15. ಪ್ಲಾಸ್ಟಿಕ್ (plastic)

ನಾನು ಈ ಕೆಳಗಿನ ಕಥೆಯನ್ನು ಬರೆದೆ 

ಒಂದು ಊರಿನಲ್ಲಿ ಒಬ್ಬ ವೈದ್ಯ ಶಸ್ತ್ರ ಚಿಕಿತ್ಸೆಯ ಪ್ರವೀಣ ನಾಗಿದ್ದನು. ದೇಶದಲ್ಲೆಲ್ಲಾ ಅವನು ಖ್ಯಾತಿ ಪಡೆದಿದ್ದನು. ಒಮ್ಮೆ ಅವನಿಗೆ ಬೇರೆ ಊರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಸಲುವಾಗಿ  ಹೋಗಬೇಕಾದ್ದರಿಂದ ಮೊದಲು ರೈಲಿನಲ್ಲಿ ಟಿಕೆಟನ್ನು ಕಾದಿರಿಸಿದನು. ಮನೆಯಲ್ಲಿ ಅವನು ಮತ್ತು ಅವನ ವಯಸ್ಸಾದ ತಾಯಿ, ಮುದುಕಿ ಅಂದರೂ ಪರವಾಗಿಲ್ಲ ಇಬ್ಬರೇ ಇದ್ದರು. ಮನೆಯಲ್ಲಿರುವ ನಾಯಿಗೆ ಮೂರು ಹೊತ್ತಿನ ಊಟ ರೆಡಿ ಮಾಡಿ ಮೂರು ಪ್ಲಾಸ್ಟಿಕ್ ಬಟ್ಟಲಲ್ಲಿ ತೆಗೆದಿಟ್ಟು ನಾಯಿಗೆ ಕೊಡಲು ತನ್ನ  ತಾಯಿಗೆ ಹೇಳಿದನು.  ವೈದ್ಯನ ಮನೆ ಕಾಡಿನ ಸಮೀಪ ಇದ್ದಿದ್ದರಿಂದ ಮತ್ತು ಕಳ್ಳರ ಕಾಟವಿದ್ದಿದ್ದರಿಂದ  ನಾಯಿಯನ್ನು ಸಾಕಿದ್ದನು. ಮನೆಯಲ್ಲಿ ಈಜುಕೊಳಹವಾನಿಯಂತ್ರಿತ ಕೊಠಡಿ, ಚಿನ್ನ, ಬೆಳ್ಳಿ, ಹಣ, ಎಲ್ಲವೂ ಇದ್ದವು. 
ತುಂಬಾ ಮಳೆ ಬರುತ್ತಿದ್ದ ಕಾರಣ ವೈದ್ಯನು ತನ್ನ ಕಾರಿನಲ್ಲಿಯೇ ಪ್ರಯಾಣ ಬೆಳಸಲು ಮುಂದಾದನು. ಮಳೆ ಜೋರಿದ್ದ ಕಾರಣ ದಾರಿಯಲ್ಲಿ ಸಿಕ್ಕ  ಸುರಂಗದಲ್ಲಿ ಹೆಚ್ಚು ನೀರಿದ್ದರೂ ಧೈರ್ಯಗೆಡದ ಆ ಊರನ್ನು ತಲುಪಿದನು. ಆಸ್ಪತ್ರೆಯಲ್ಲಿ ಉಪಾದ್ಯಕಿಯ ಹೃದಯ ಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಊರಿನ ಎಲ್ಲ ಜನರ ಪ್ರಶಂಸೆಗೆ ಪಾತ್ರನಾದನು. ಊರಿನ ಜನರು ವೈದ್ಯನ ರಾಜ ಕಾರ್ಯವನ್ನು ಶ್ಲಾಗಿಸಿದರು.
***


A surprise was awaiting to all the 12 participants in the RSS's ಅನೌಪಚಾರಿಕ್ ನಿವಾಸಿ ವರ್ಗ. The event was held on Wednesday, April 16, 2025, at Gopalaswamy Shishuvihara, Lakshmipuram, Mysore. We were instructed to arrive by 8 pm, bringing our respective food boxes to share with the group. The evening took an exciting turn with a surprise competition, the details of which are outlined below:

Write a story (in Kannada) using the following 15 words
  • Kāḍu (ಕಾಡು)
  • Nāyi (ನಾಯಿ)
  • Mane (ಮನೆ)
  • Maḷe (ಮಳೆ)
  • Ījukōḷa (ಈಜುಕೊಳ)
  • Suranga (ಸುರಂಗ)
  • Havāniyantrita (ಹವಾನಿಯಂತ್ರಿತ)
  • Railu (ರೈಲು)
  • Āspatre (ಆಸ್ಪತ್ರೆ)
  • Adhyāpaki (ಅಧ್ಯಾಪಕಿ)
  • Kaḷḷa (ಕಳ್ಳ)
  • Vaidya (ವೈದ್ಯ)
  • Muduki (ಮುದುಕಿ)
  • Rāja (ರಾಜ)
  • Plāsṭik (ಪ್ಲಾಸ್ಟಿಕ್)

I wrote the following story.

Ondu ūrinalli obba vaidya śastra chikitsheya pravīṇa nāgiddanu. Dēśadallellā avanu khyāti paḍediddanu. Omme avanige bēre ūrige hr̥udayada śastra chikitshe saluvāgi hōgabēkāddarinda modalu railinalli tiǩeṭannu kādirisidanu. Maneyalli avanu mattu avana vayassāda tāyi, muduki annadū paravāgilla ibbarē iddaru. Maneyalliruva nāyige mūru hottina ūṭa reḍi māḍi mūru plāsṭik baṭṭalalli tegediṭṭu nāyige koḍalu tanna tāyige hēḷidanu. Vaidyana mane kāḍina samīpa iddidddarinda mattu kaḷḷara kāṭaviddiddarinda nāyiyannu sākidididanu. Maneyalli ījukōḷa, havāniyantrita koṭhaḍi, chinna, beḷḷi, haṇa, ellavū iddavū.

Tumbā maḷe baruttidda kāraṇa vaidyana tanna cārinalliyē prayāṇa beḷasalu mundādanu. Maḷe jōrida kāraṇa dāriyalli sikka surangadalli hechu nīriddarū dhairyageḍada ā ūranu talupidanu. Āspatreyalli upādhyakiya hr̥udaya chikitshe māḍuvudu anivāryavāyittu. Āspatreyalli hr̥udaya chikitsheyannu yaśasviyāgi māḍi ūrina ella janara praśanshege pātranādanu. Ūrina janaru vaidyana rāja kāryavannu ślāgisidaru.

**

end- recollections and documented ಸಂಟೈಂ ಇನ್ April 2025 by ಸುರೇಶ್ ಹುಲಿಕುಂಟಿ

.


...


Comments

Popular posts from this blog

intro