Posts

HOME THEY BROUGHT HER WARRIOR DEAD

Image
    poem is reproduced in this picture assistance My post script: This is indeed a beautiful poem, and I am glad my daughter, Chaitra asked me to provide a detailed explanation, as it gave me the opportunity to delve deeper into its meaning. Life inevitably has its ups and downs. The challenge lies in how we confront and overcome the sad moments and incidents, and continue to move forward. By doing so, we can emerge stronger and more resilient. Ultimately, this poem serves as a poignant reminder of the importance of perseverance and hope in the face of adversity. Anyway, on a lighter note: Chaitra says in her email that this poem is a very easy one. Get it? 😄 It's simply simple—when she says it's very easy, why should she asking me? *** Explaining the poem - Contents of Poem is shown in above picture Home They Brought Her Warrior Dead The great poet Alfred Lord Tennyson, who was born in England in 1802, was eccentric in nature. However, his poems deal with human psychology, f...

HIND MUNNUDI ಹಿಂದ್ ಮುನ್ನುಡಿ 🤔😀

Image
    ಲಘುಬರಹ Imaginative story -Time 1980s "ಇದೇನಿದು ಹಿಂದಿನ ನುಡಿಯೋ, ಹಿಂದೆ ಯಾವಾಗಲೋ ಬರೆದ ಮುನ್ನುಡಿಯೋ, ಅಥವಾ ಹಿಂದ್-ಮುಂದ್ ಗೊತ್ತಿಲ್ಲದ ನುಡಿಯೋ?" ಎಂದು ನೀವು ತಲೆ ಕೆಡಿಸಿಕೊಳ್ಳುತ್ತಿದ್ದೀರಾ! ನೀವು ಊಹಿಸಿದಂತೆ ಇದಾವುದೂ ಅಲ್ಲ. ನಿಧಾನವಾಗಿ ಓದುತ್ತಾ ಹೋದಂತೆ, ಇದಾವ ನುಡಿಯೆಂದು ನಿಮಗೇ ಅರ್ಥವಾಗಬಹುದೆಂದು ಭಾವಿಸಿ, ನನ್ನೀ ನುಡಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮೆಲ್ಲರ ಕಿಡಿನುಡಿ ಟೀಕೆಗಳಿಗಾಗಿ ನಾನು ಕಾಯುತ್ತಿದ್ದೇನೆ. 1980 ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನನಗೆ ಮುಂಬೈಯಲ್ಲಿರುವ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಈ ಸಂತೋಷದ ಗುಂಗಿನಲ್ಲಿ ನನ್ನನ್ನು ಕಾಡಲು ಪ್ರಾರಂಭಿಸಿದ ಭಯಕ್ಕೆ ಕಾರಣವಿಷ್ಟೇ – ಮೈಸೂರಿನಲ್ಲಿ ಓದಿದವನು ನಾನು, ಅಲ್ಲಿ ಆಗ ಎಲ್ಲಾ ಶಾಲೆಗಳಲ್ಲಿ ಕನ್ನಡಕ್ಕೆ ಮಾತ್ರ ಪ್ರಾಮುಖ್ಯತೆ ಇತ್ತು. ಐದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಹಿಂದಿ ಭಾಷೆಯನ್ನು ನಾವು ಕಲಿಯಬೇಕಾಗಿದ್ದರೂ, ಪರೀಕ್ಷೆ ಕೇವಲ 50 ಅಂಕಗಳಿಗೆ ಮಾತ್ರ ಇತ್ತು. ಅಷ್ಟೇ ಅಲ್ಲದೆ, ಪರೀಕ್ಷಕರು ತುಂಬಾ ಉದಾರವಾಗಿ ಅಂಕಗಳನ್ನು ಕೊಡುತ್ತಿದ್ದರು. ಎಲ್ಲ ಹುಡುಗರು ಹಿಂದಿ ಕಲಿಕೆಗೆ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಉಪನ್ಯಾಸದ ಸಮಯದಲ್ಲಿ ಹುಡುಗರ ಗದ್ದಲವೋ ಗದ್ದಲ. ಆದರೂ ನಾನು ಜವಾಬ್ದಾರಿಯಿಂದ ಓದಿ ಹಿಂದಿಯಲ್ಲಿ ಸಣ್ಣ ವಾಕ್ಯಗಳನ್ನು ಬರೆಯಲು ಕೂಡ ಕಲಿತಿದ್ದೆನು. ಅಮಿತಾಭ್, ಧರ್ಮೇಂದ್ರ, ಜಿತೇಂದ್ರ...

A NEW DISH HOSARUCHI ಹೊಸರುಚಿ 🤔😀

Image
    ಲಘುಬರಹ  Imaginative story- Time-->when lazy men are still going to office ಕಾರಣಾಂತರದಿಂದ ನನ್ನವಳು ತವರೂರಿಗೆ ಹೋಗಬೇಕಾಗಿದ್ದಿದ್ದರಿಂದ ನಾನು ಎರಡು ದಿನ ಆಫೀಸಿಗೆ ರಜೆ ಹಾಕಬೇಕಾಗಿತ್ತು. ಕಾರಣ ಮಗ ಹಾಗೂ ಮಗಳನ್ನು ನೋಡಿಕೊಳ್ಳುವ ಭಾರ ನನ್ನ ಮೇಲೆ ಬಿದ್ದಿತ್ತು. ದೇವರ ದಯೆಯಿಂದ ಮಕ್ಕಳ ಶಾಲೆಗೆ ಜನಗಣತಿಯ ಪ್ರಯುಕ್ತ ಎರಡು ದಿನಗಳ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟಂತಹ ಹೋಮ್ ವರ್ಕ್, ಸಮವಸ್ತ್ರಗಳ ಇಸ್ತ್ರಿ, ಬೂಟುಗಳ ಪಾಲಿಶ್, ಶಾಲೆಗೆ ಕೊಂಡೊಯ್ಯಲು ಉಪಾಹಾರದ ವ್ಯವಸ್ಥೆ ಇತ್ಯಾದಿ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಸಂದರ್ಭ ಬರಲಿಲ್ಲ. ಅಡುಗೆ ಕೋಣೆಗೇ ಕಾಲಿಡದ ನಾನು ಈಗ ಎರಡು ದಿನ ಹೇಗಪ್ಪ ಊಟದ ವ್ಯವಸ್ಥೆ ಮಾಡುವುದು ಎಂದು ಯೋಚನಾಮಗ್ನನಾದೆನು. ಬೆಳಿಗ್ಗೆ ಕಾಮತ್ ಕೆಫೆಯಿಂದ ಇಡ್ಲಿ ವಡೆ ತರುವುದು ಎಂದು ನಿರ್ಧರಿಸಿದೆ. ಮಕ್ಕಳನ್ನು ಮನೆಯ ಒಳಗೆ ಬಿಟ್ಟು ಬಾಗಿಲು ಹಾಕಿಕೊಳ್ಳಲು ಹೇಳಿ ಮೋಟಾರ್ ಸೈಕಲ್ ನಲ್ಲಿ ಹೋಟೆಲಿಗೆ ಹೋದೆ. ಉಪಹಾರವನ್ನು ಪಾರ್ಸೆಲ್ ಮಾಡಲು ಹೇಳಿ ಕುರ್ಚಿಯಲ್ಲಿ ಕುಳಿತು ಅಲ್ಲಿಯೇ ಒಂದು ಲೋಟ ಕಾಫಿ ತರಲು ಹೇಳಿದೆ. ಕಾಫಿ ಕುಡಿದು ಮನೆಗೆ ಪಾರ್ಸೆಲ್ ತಂದದ್ದಾಯಿತು, ಮಕ್ಕಳು ತಿಂದದ್ದೂ ಆಯಿತು. ಸದ್ಯ ಹೇಗೋ ಬೆಳಿಗ್ಗಿನ ಕತೆ ಕಳೆಯಿತು ಎಂದು ಯೋಚಿಸುತ್ತಿರುವಾಗಲೇ ಮಧ್ಯಾಹ್ನದ ಚಿಂತೆ ಪ್ರಾರಂಭವಾಯಿತು. ಮಧ್ಯಾಹ್ನ ಹರ್ಷಮಹಲ್ ಹೋಟೆಲಿಗೆ ಊಟಕ್ಕೆ ಎಲ್ಲಾರೂ ಹೋಗಿ ನ...

RAMA RAMA RAMA ರಾಮ ರಾಮ ರಾಮ 🤔😀

Image
    Imaginative one act drama  ಪ್ರಹಸನ ಮುಂಸೀಫ್ ನ್ಯಾಯಾಲಯ ಸಿವಿಲ್ ಕೇಸ್ ನಂ. 111/2002 ಸೀತಾ ಸೀತಾ ಸೀತಾ... ಲಾಯರ್:  ಇಲ್ಲಿ ಬನ್ನಿಯಮ್ಮ, ಈ ಕಟಕಟೆಯಲ್ಲಿ ನಿಲ್ಲಿರಿ.  ಈ ಗೀತೆಯ ಮೇಲೆ ಕೈಯಿಟ್ಟು 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಮತ್ತೇನನ್ನು ಹೇಳುವುದಿಲ್ಲ' ಎಂದು  ಪ್ರಮಾಣ ಮಾಡಿರಿ. ಸೀತಾ:  ಏನ್ರೀ ಲಾಯರ್ ರವರೇ ಆ ಗೀತಾಳಿಂದಲೇ ನಾನು ಇಲ್ಲಿಯವರೆಗೆ ಬರುವಂತಹ ಸ್ಥಿತಿ ಬಂದಿದೆ.  ಆ  ಗೀತಾಳ ಹೆಸರು ಮತ್ತೆ ಹೇಳ್ಬೇಡಿ ಲಾಯರ್:   ನಾನು ಈ ಭಗವದ್ಗೀತೆ ಪುಸ್ತಕದ ಮೇಲೆ ಕೈ ಇಟ್ಟುಕೊಂಡು ಪ್ರಮಾಣ ಮಾಡು ಎಂದಿದ್ದು ಅಷ್ಟೇ ಸೀತಾ:   ಆಯ್ತಾಯ್ತು, ನಾನು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಮತ್ತೇನನ್ನು ಹೇಳುವುದಿಲ್ಲ ಲಾಯರ್:   ನಿಮ್ಮ ಹೆಸರು ? ಸೀತಾ:  ಇಗತಾನೇ ಮೂರು ಬಾರಿ ಕರೆದರಲ್ಲ, ಮತ್ತೇಕೆ ಕೇಳುತ್ತೀರಿ ? ಲಾಯರ್:  ಅದೆಲ್ಲ ಬೇಡ, ನಾನು ಕೇಳಿದ್ದಕ್ಕೆ ಉತ್ತರಿಸಿರಿ ಸೀತಾ:   ಸೀತಾ ಲಾಯರ್:  ನಿಮ್ಮ ಯಜಮಾನರ ಹೆಸರು ? ಸೀತಾ:  ಅಲ್ಲಿ ಎದುರಿಗೆ ನೀತಿದ್ದಾರಲ್ಲ, ಅವರೇ ಲಾಯರ್:   ನಾನು ಎಲ್ಲೀ ಅಂತ ಕೇಳಲಿಲ್ಲ, ನಿಮ್ಮ ಯಜಮಾನರ ಹೆಸರು ಹೇಳಿ ಸೀತಾ:   ಅದೇ ಸ್ವಾಮಿ ಅಲ್ಲಿ ಎದುರಿಗೆ ಇದ್ದರಲ್ಲಾ ಅವ್ರೇ ಲಾಯರ್:  ಅವರ ಹೆಸರು ? ಸೀತಾ:    ----- ಲಾಯರ್:  ...